Tuesday 1 November 2011

ಸಿರಿಗನ್ನಡಂ ಗೆಲ್ಗೆ




ತೆರೆಯುವುದೆನ್ನೆದೆಯ ಕದವು ನುಡಿವಾಗ ಕನ್ನಡವ
ಕುಣಿಯುವುದೆನ್ನ ಮನವು ಕೇಳಿದೊಡೆ ಕನ್ನಡ ಪದವ
ಸದಾ ಮುಡಿಪು ಎನ್ನ ಜೀವನವು ರಕ್ಷಿಸಲು ತಾಯಿ ಕನ್ನಡವ ||೧||

ಆ ಶಬ್ಧ,ಈ ಶಬ್ಧ ನಿಶ್ಶಬ್ಧ ಎಂಬೋ ಆ ಆಂಗ್ಲವೆಲ್ಲಿ?
ಪ್ರತೀ ಶಬ್ಧವೂ ಅಥ೯ಬದ್ಧವಾಗಿಹ ನಮ್ಮ ಸಿರಿಗನ್ನಡವೆಲ್ಲಿ?
ಆದರೂ ಜನರ ಆಂಗ್ಲ ವ್ಯಾಮೋಹಕ್ಕೆ ಎಲ್ಲೆ ಎಲ್ಲಿ? ||೨||

ಉಳಿಯಲು ಬೇಕು ಕನಾ೯ಟಕದ ನೆಲವು
ಕುಡಿಯಲು ಬೇಕು ಕಾವೇರಿ ಜಲವು
ನುಡಿಯಲು ಮಾತ್ರ ಏಕೆ ಬೇಡ ಕಸ್ತೂರಿ ಕನ್ನಡವು? ||೩||

ಹೆತ್ತ ತಾಯಿ ಕನ್ನಡಾಂಬೆ ಇರಬೇಕಾದರೆ ನಮ್ಮ ಬಳಿಗೆ
ಏಕೆ ಹೋಗಬೇಕು ಮಲತಾಯಿ ಆಂಗ್ಲದೆಡೆಗೆ?
ಆಂಗ್ಲವೇ ಅಲ್ಲ,ಮತ್ತೊಂದೇ ಇದಿರಾದರೂ, ಎಂದೆಂದಿಗೂ
"ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ" ||೪||