Thursday 12 June 2014

ಚಂದಿರ


ಭಾರವಾಗಿದೆ ಈ ಹೃದಯ
ಭಾರವ ತುಸು ಇಳಿಸುವೆಯಾ?

ಕಣ್ಣೀರು ರೆಪ್ಪೆ ಕದ ಮುಟ್ಟಿದೆ
ದಯಮಾಡಿ ತಡೆಯುವೆಯಾ?

ತಂತಿಯೇ ಇಲ್ಲದ ವೀಣೆಯಾಗಿದೆ
ನಾದವ ತರಿಸುವೆಯಾ?

ಬಾಳ ಬೆಳದಿಂಗಳು ಅಸುನೀಗಿದೆ
ನೀನೇ ಚಂದಿರನಾಗುವೆಯಾ?

- ನಿರುಪಯೋಗಿ