Sunday 14 December 2014

ಕ್ಯಾಮರಾ

   
Prime lens zoom lens ಎಂದು
 ಮಾರುಕಟ್ಟೆಯಲ್ಲಿ lens ಗಳು ಸಾವಿರ


ಆದರೆ ನಾ ಬಡವ
  ನನಗೆ ಕಣ್ಣೇ ಕ್ಯಾಮರಾ


- ನಿರುಪಯೋಗಿ

Friday 21 November 2014

For you and your family - One Minute Please

ಸ್ವಚ್ಛ ಭಾರತ





'ಶುಚಿಯಾಗಿಡಿ' ಎಂದು ಪರಿಸರಸ್ನೇಹಿಗಳು 
ಹೇಳಿದಾಗ ಕಿವಿಕೊಡದವರು

ಮೋದಿಜಿ, 'ಸ್ವಚ್ಛ ಭಾರತ' ಎಂದೊಡನೆ
ಪೊರಕೆ ಹಿಡಿದು ಹೊರಟರು

     ಇದಕ್ಕೆ ಇರಬೇಕು, ಶಂಖದಿಂದ ಬಂದರೆ ತೀರ್ಥ 
ಎಂದು ಹೇಳುವುದು ದೊಡ್ಡವರು!

- ನಿರುಪಯೋಗಿ 

Thursday 12 June 2014

ಚಂದಿರ


ಭಾರವಾಗಿದೆ ಈ ಹೃದಯ
ಭಾರವ ತುಸು ಇಳಿಸುವೆಯಾ?

ಕಣ್ಣೀರು ರೆಪ್ಪೆ ಕದ ಮುಟ್ಟಿದೆ
ದಯಮಾಡಿ ತಡೆಯುವೆಯಾ?

ತಂತಿಯೇ ಇಲ್ಲದ ವೀಣೆಯಾಗಿದೆ
ನಾದವ ತರಿಸುವೆಯಾ?

ಬಾಳ ಬೆಳದಿಂಗಳು ಅಸುನೀಗಿದೆ
ನೀನೇ ಚಂದಿರನಾಗುವೆಯಾ?

- ನಿರುಪಯೋಗಿ