Thursday, 15 September 2011

ಅನುಭವ..



ಬಹುದಿನಗಳಿಂದ ಮನದ ಮುಖಪುಟದಲ್ಲಿದ್ದ ಬಯಕೆಯಾಗಿತ್ತು ಹೊರೆ |
ಅಂತೂ ಇಂತೂ over night trekking ನ ಅನುಭವದ ಕುತೂಹಲಕ್ಕೆ ಬಿದ್ದಿತ್ತು ತೆರೆ ||

ಗೆಳೆಯರ ಸಮ್ಮಿಲನದ ಬಳಿಕ ಚಾಲನೆ ಸಿಕ್ಕಿತ್ತು ನಮ್ಮ ಪಯಣಕೆ |
ಇನ್ನು ಸ್ವಲ್ಪ ಎತ್ತರವಿದ್ದಿದ್ದರೆ ಗಗನವನ್ನೆ ಚುಂಬಿಸುತ್ತಿತ್ತೆನೋ,ಅಂತಹ ’ಬಾಳೆಗುಡ್ಡ’ ಕೆ ||

ಆ ಕಲ್ಲು ಮುಳ್ಳಿನ ಹಾದಿಯಲ್ಲಿ ಪದೆ ಪದೆ ಸಿಗುತ್ತಿದ್ದ ಒಬ್ಬ ಖಳನಾಯಕ |
ನಮ್ಮಂತಹ ಬಡಪಾಯಿಗಳ ರಕ್ತ ಹೀರುವುದೊಂದೇ ಅವನಿಗಿರುವ ಕಾಯಕ ||

ಆಗೊಮ್ಮೆ ಈಗೊಮ್ಮೆ ಎಂಬಂತೆ ಬಂದು ಹೋಗುತ್ತಿತ್ತು ಮಳೆಯೆಂಬ ಮಾಯಾವಿ |
ಆ ಮಾಯೆಯ ಬಗ್ಗೆ ಎಷ್ಟೇ ಅರಿತರೂ ನಾನಿನ್ನು ಅನನುಭವಿ ||

ಕಷ್ಟ ಪಟ್ಟೋ, ಇಷ್ಟ ಪಟ್ಟೋ ತಲುಪಿದೆವು ಬೆಟ್ಟದ ತುತ್ತತುದಿ |
ಆ ಕ್ಷಣದಲಿ ಮನ ಗೊಣಗುತ್ತಿತ್ತು, "ಆಹಾ ನಾ ನಿಂತಿರುವೆ ಸ್ವರ್ಗದಿ" ||

ಅಲ್ಲಿ ಇಲ್ಲಿ ಎಲ್ಲೆಲ್ಲೂ ಹಚ್ಚ ಹಸುರಿನ ಮುಗುಳ್ನಗು |
ಮೂಗಿನ ಮೇಲಿನ ಮೂಗುತ್ತಿಯಂತೆ, ಗಿರಿಕನ್ಯೆಯ ಮೇಲೆ ಇಬ್ಬನಿಯ ಮೆರುಗು ||

ಆ ಎತ್ತರದ ಬೆಟ್ಟ ಹತ್ತಿಳಿದು ದಣಿದು ಹೋಗಿದ್ದೆವು ನಾವು |
ಭಗೀರಥ ಪ್ರಯತ್ನದಿ ಮಾಡಿದ BRU COFFEE ಯು ಕೊಟ್ಟಿತು ಬೆಚ್ಚನೆಯ ಕಾವು ||

ಚಿಕ್ಕ ಜಲಧಾರೆಯ ಸದ್ದು ಸೆಳೆಯಿತು ನಮ್ಮನ್ನು ಅದರೆಡೆಗೆ |
ರಾಗ ತಾಳವಿರಲಿಲ್ಲ ನಾವು ನೀರಲ್ಲಿ ಮುಳುಗಿ ಹಾಡಿದ ಹಾಡಿಗೆ ||

ನಮ್ಮ ಅಗಲುವಿಕೆಯಿಂದ ಬೇಸರಗೊಂಡಿದ್ದ ಗಿಡ ಮರ leech ಗಳಿಗೆಲ್ಲಾ ಹೇಳಿದೆವು ವಿದಾಯ |
ನಮ್ಮ ತಂಡದೊಂದಿಗೆ ಮತ್ತೆ ಮತ್ತೆ ಭೇಟಿ ನೀಡುವೆವು ಎಂಬ ಆಶ್ವಾಸನೆಯ ಅಭಯ ||

ನಿರುಪಯೋಗಿ

1 comment:

  1. its about my experience regarding my first over night trekking..

    ReplyDelete