Wednesday 6 December 2017

ನಮ್ಮದಲ್ಲದ್ದು!


ನಮ್ಮದಲ್ಲದ್ದನ್ನು ಕೆಲವೊಮ್ಮೆ
ನಮ್ಮದೇ ಎಂದು ನಂಬುತ್ತೇವೆ
ಅದನ್ನು ಬಾಚಿ ತಬ್ಬಿಕೊಳ್ಳುತ್ತೇವೆ
ಹಿಡಿದಿಡಿದು ನಗುತ್ತೇವೆ, ಅಳುತ್ತೇವೆ, ಕನಸು ಕಾಣುತ್ತೇವೆ
ಕೊನೆಗೆ ಅದು ನಮ್ಮದಲ್ಲ ಎಂಬುದು
ಅರಿವಿಗೆ ಬರುವ ವೇಳೆಗೆ
ನಾವಾಗಲೇ ತಿರುಗಿ ಬಾರದಷ್ಟು
ದೂರ, ಬಹುದೂರ ನಡೆದಿರುತ್ತೇವೆ
ಮರಳಿ ಬರಲು ಬಯಸಿದರೂ
ಕಣ್ಣ ತುಂಬಿದ ಕಂಬನಿ
ದಾರಿ ಕಾಣದ ಹಾಗೆ ಕಂಗಾಲು ಮಾಡಿ ಬಿಟ್ಟಿರುತ್ತದೆ
ನಾವು ನಿಂತಲ್ಲೆ ನಿಂತು ಬಿಡುತ್ತೇವೆ, ಕುಸಿದು ಬಿಡುತ್ತೇವೆ!

11 comments:

  1. ಭಾವನೆಗಳನ್ನು ಹಂಚಿಕೊಳ್ಳಲು ಕಡಲತೀರಕಿಂತ ಒಳ್ಳೆಯ ಜಾಗ ಎಲ್ಲಿ. ನಿಮ್ಮ ಲೇಖನ ಚೆನ್ನಾಗಿದೆ

    ReplyDelete
    Replies
    1. ತುಂಬಾ ಧನ್ಯವಾದ ನಿಮ್‌ ಮಾತಿಗೆ :)

      Delete
  2. This comment has been removed by the author.

    ReplyDelete
    Replies
    1. If it doesn't open, its not your door. ಆದ್ರಿಂದ ಮುಂದ್ ಹೋಗ್ತಾ ಇರ್ಬೇಕು

      Delete
    2. This comment has been removed by the author.

      Delete
  3. ಕುಸಿದು ಬೀಳುವ ಯಾವ ಪರಿಯೂ ಇಲ್ಲ. ಗೌರವವಿದ್ದ ಕಡೆ ಹೆಜ್ಜೆ ಇಟ್ಟರಷ್ಟೆ ಸಾಕು. ಬಾಕಿ ಎಲ್ಲ ತಾನಾಗಿಯೇ ಕೂಡಿಕೊಲ್ಲುತ್ತದ್ದೆ.

    ReplyDelete
  4. ಸಾಗರದ ಕಲ್ಪನೆ ನಿಜಕ್ಕೂ ಅದ್ಭುತ ಈ ಸಾಹಿತ್ಯ ಪ್ರಪಂಚದಲ್ಲಿ!ಉಪ್ಪನ್ನು ತಾನುಂಡು, ಸಿಹಿನೀರು ನಿಮಗಿರಲಿ ಎನ್ನುವ ಸಾಗರದ ಧನ್ಯತೆಯ ಭಾವ ನಿನ್ನಲ್ಲೂ ಕಾಣುತ್ತಿದ್ದೇನೆ‌.

    ReplyDelete
    Replies
    1. ದೊಡ್ ಮಾತು ಕಣೆ :) ಥ್ಯಾಂಕ್ಯೂ :)

      Delete
  5. ಚನ್ನಾಗಿದೆ👌

    ReplyDelete
  6. ಧನ್ಯವಾದ ಮಗಾ :)

    ReplyDelete